ಗುರುವಾರ, ಮಾರ್ಚ್ 1, 2012

ಅರಿವು

೧. ಜೀವನ ಸುಖ ದುಃಖಗಳ ಬಣ್ಣದಲ್ಲಿ ಬರೆದ ಪರಮಾತ್ಮನ ಅದ್ಭುತ ಚಿತ್ತಾರ .
೨. ಎಡಗಡೆ ಪಡೆದ ಎಲ್ಲವನ್ನು ನಾವು ಇಲ್ಲೆ (ಸಂಸಾರ ದಲ್ಲಿ) ಬಲಗಡೆ ಒಪ್ಪಿಸಿ ಹೋಗಬೇಕು.-ಇದು ಜೀವನದ ನಿಯಮ .
LHS = RHS
೩. ಜಗತ್ತಿನಲ್ಲಿ ಯಾವುದೂ ಪೂರ್ಣ ಪ್ರಮಾಣ ದಲ್ಲಿ , ಸಾರ್ವ ಕಾಲಿಕವಾಗಿ ಸರಿ ಅಥವಾ ತಪ್ಪು ಆಗಿರಲು ಸಾಧ್ಯವಿಲ್ಲ .
(ಈ ವಾಕ್ಯವನ್ನು ಹೊರತು ಪಡೆಸಿ)

೪. ನಾವು ಕೊಟ್ಟಷ್ಟೇ ಪಡೆಯುವೆವು , ಪಡೆದಷ್ಟೇ ಕೊಡಬೇಕಾಗುತ್ತದೆ .
೫. ಸಂಬಂಧ ಎಂದರೆ ಕಾಸಿಲ್ಲದೆ ಮಾಡುವ ವ್ಯವಹಾರ ಎನ್ನ ಬಹುದೇ ?
೬. ಪ್ರಪಂಚ / ಜೀವನ ಕನ್ನಡಿ ಇದ್ದಂತೆ ನೀವು ಏನು ತೋರಿಸುತಿರೋ ಅದನ್ನೇ ನೋಡ ಬೇಕಾಗುತ್ತದೆ .




ಹೆಮ್ಮೆ -ಹಿರಿಮೆ

ತಂತ್ರಾಂಶ ಬರೆಯಲು ಬೇಕು ಸಾಮನ್ಯ ಜ್ಞಾನ

ಅದನ್ನು ಉತ್ಕೃಷ್ಟ ವಾಗಿ ಮಾಡಲು ಬೇಕು CMMI ಜ್ಞಾನ

ಇದೇನೋ ಹಿಮಾಲಯ ತಪಸ್ಸಿನ ಜ್ಞಾನ ವಲ್ಲ

ಅರಿತು ಮಾಡಿದರೆ ಆಗುವುದು ಸಾಮನ್ಯ ಜ್ಞಾನ

ಕ್ರಮಾನುಸಾರ ಮಾಡಿದ ಕಾರ್ಯಕಾಣುವುದು ನಿಶ್ಚಿತ ಆಕಾರ

CMMI ಅಂದರೆ ಬರೆ ಕಡತ ಗಳಲ್ಲನಮ್ಮ ಕಾರ್ಯದ ಕ್ರಮಬದ್ದ ಸಾಕ್ಷಿಗಳು

ನಮ್ಮ ಕೆಲಸದಲ್ಲಿ CMMI ಹೊರತು

CMMIಗಾಗಿ ನಮ್ಮ ಕೆಲಸ ವಾಗಬಾರದು

ಇದು ಕೇವಲ ಪ್ರಶಸ್ತಿ ಪತ್ರ ವಲ್ಲನಮ್ಮ ನಿತ್ಯ ನೂತನ ಕಾರ್ಯದ ಪುರಸ್ಕಾರದ ಪತ್ರ

ಇದನ್ನು ಪಡೆದಿರುವುದು ನಮ್ಮ ಹೆಮ್ಮೆ

ಆದರೆ ಅದನ್ನು ಉಳಿಸಿ ಕೊಳ್ಳುವುದರಲ್ಲಿದೆ ನಮ್ಮ ಹಿರಿಮೆ

ಮೊದಲ ಬ್ಲೋಗ್:'ಸ' ಕಾರದ ಧನಾತ್ಮಕ ಶಕ್ತಿ

'ಸಹೃದಯ ಓದುಗರೇ' ನೋಡಿ ನಿಮ್ಮ ಸಂಬೋದಿಸುವ ಪದವೇ 'ಸ' ಕಾರ , ನಾನು ಹೇಳಬೇಕೆಂದಿರುವ ವಸ್ತು ವಿಷಯ 'ಸ' ಕಾರ ದಿಂದ ಬರುವಪದಗಳನ್ನು ಒಮ್ಮೆ ಗಮನಿಸಿ 'ಸಜ್ಜನಿಕೆ' ,' ಸಹೃದಯ','ಸಾದನೆ',ಸಾಧು,ಸ್ವಾತಂತ್ರ ,ಸಾಕ್ಷಾತ್ಕಾರ ,ಸನ್ ಮಂಗಳ,ಸದಾಚಾರ,ಸಾಧನೆ ,ಸಂಕಲ್ಪ,ಸಂಗೀತ,ಸದಬಿರುಚಿ,ಸಂಸ್ಕೃತಿ ,ಸಾಹಿತ್ಯ,ಸವಿನೆನಪು,ಸವಿಗಾನ,ಸಂಸಾರ,ಸಾಗರ,ಸುಹಾಸಿನಿ,ಸಾಕ್ಷರತೆ ಹೀಗೆ ಪಟ್ಟಿ ಬೆಳೆಯುತ ಹೋಗುತಧೆ ಈ ಪದಗಳು ಒಂದು ಧನಾತ್ಮಕ ಸ್ಪೂರ್ತಿ ಹೊರಹೊಮ್ಮುತ್ತವೆ.ಹೀಗೆ 'ಸ' ಕಾರದ ಈ ವಿಶೇಷತೆ ನನ್ನನು ಬರೆಯಲು ಪ್ರೇರೇಪಿಸಿತು .ಎಲ್ಲ ಒಳ್ಳೇ ಭಾವನೆಗಳು ಸ ಕಾರಕ್ಕೆ ಏಕೆ ಸುತ್ತಿಕೊಂಡಾವೆಂದು ಆಶ್ಚರ್ಯವಾಯೆತು.ಅದನ್ನೇ ಅಕ್ಷರ ರೂಪ ದಲ್ಲಿ ಈಲ್ಲಿ ತೆರೆದಿಟ್ಟಿರುವೆ.